ಈ ಬ್ಲಾಗ್ನಿಂದ ಹುಡುಕಿ

Main Menu

ಮಂಗಳವಾರ, ನವೆಂಬರ್ 1, 2011

ದುರಂತ ಜೀವನ

ಕೇಳಿರಿ ಕೇಳಿರಿ ನಾಡಿನ ಜನಗಳೆ
ಕಥೆಯೊಂದನು ನಾ ಹೇಳುವೆನು,
ಕಥೆಯೆಂದರೆ ಇದು ಬರಿಕಥೆಯಲ್ಲ
ಹೇಳುವೆ ನಾ ಈ ನಿಜ ಕಥೆಯ.॥೧॥

ಬನ್ನಿರಿ ಬನ್ನಿರಿ ಕಥೆಯನು ಕೇಳಿರಿ
ಈ ಕಥೆಯು ಬಲು ಸುಂದರವೋ?
ಕೇಳಿರಿ ಕೇಳಿರಿ ಈ ಕಥೆಯನ್ನು
ಎಂದೆಂದಿಗೂ ಈ ಕಥೆ ಮಾಡದಿರಿ.॥೨॥
ಇರುವರು ಜನರು ನಾಡಿನಲಿ
ಲೋಪ ಹೃದಯದ ದೇಹದಲಿ
ಇರುವುದೇ ಇವರಿಗೆ ಜ್ಞಾನದ ಮಿದುಳು,
ಇದ್ದರೆ ಈ ಕಥೆ ಮಾಡುವರೋ?॥೩॥
ದೂರದ ಊರಲಿ ಮನೆಯೊಂದಿತ್ತು
ಹೊಟ್ಟೆ ತುಂಬಿದ ನಾಯೊಂದಿತ್ತು.
ನಾಲಕು ದಿನದ ನಂತರವಷ್ಟೇ
ಮರಿಗೆ ಜನ್ಮವ ನೀಡಿತ್ತು.॥೪॥
ಹೆಣ್ಣದು ಹೆಣ್ಣದು ನಮಗೆ ಬೇಡದು
ಬೀದಿಗೆ ತಂದು ಹಾಕಿದರು.
ಶಾಲಾಮಕ್ಕಳ ಬೆನ್ನ ಹಿಡಿದು
ಶಾಲೆಯ ಒಳಗೂ ಹೊಕ್ಕಿದವು.॥೫॥
ಗುರುಗಳು ಇದ್ದರು ಆ ದಿನದಿ
ಪಾಠವ ಮಾಡುತ ಕ್ಲಾಸಿನಲಿ.
ಮಕ್ಕಳ ಮುಖದಲಿ ನಗುವೂ ಬಂತು
ಕುಂಞ ಕುಂಞ ಎನ್ನುವ ಶಬ್ದವೂ ಬಂತು.॥೬॥
ಏನದು ಏನದು ಕೇಳಿದ ಗುರುಗಳು
ಮಕ್ಕಳ ಸಂಖ್ಯೆಯು ಹೆಚ್ಚಿತ್ತು.
ಓಡಿಸಿ ಓಡಿಸಿ ದೂರವ ಓಡಿಸಿ
ದಂಡವ ಹಿಡಿದು ಗುಡುಗಿದರು.॥೭॥
ಹೊರಗಡೆ ನಿಂತ ನಾಯಿ ಮರಿಯು
ಆಹಾರಕ್ಕಾಗಿ ಹುಡುಕುತಲಿತ್ತು.
ಮಳೆಯ ಹನಿಯಲಿ ನೆನೆದು ನೆನೆದು
ಗಡ-ಗಡ ಗಡ-ಗಡ ನಡುಗುತಲಿತ್ತು.॥೮॥
ನಾಯಿಮರಿಯನು ಕಂಡ ಕಾಗೆಯು
ಆಹಾರ ಹುಡುಕುತ ಬರುತ್ತಿತ್ತು.
ಕಟ-ಕಟ ಕುಟ್ಟುವ ದೃಶ್ಯವು ನನ್ನ
ಕಣ್ಣೀರನ್ನು ಸುರಿಸಿತ್ತು.॥೯॥
ಮರಿಯನು ಮನೆಗೆ ಹೊಯ್ದಾಯ್ತು
ಅನ್ನ ನೀರ ಕೊಟ್ಟಾಯ್ತು
ಬಾಡಿದ ಮುಖವನು ಹೊಂದಿತ್ತು,
ಮೂಲೆ ಗುಂಪಿಗೆ ಸೇರಿತ್ತು.॥೧೦॥
ನಗುತಲೇ ಇತ್ತು ಇಣುಕುತಲೀ
ನೀರು ತುಂಬಿದ ಪಾತ್ರೆಯಲಿ
ಬಳಗವ ಕರೆಯುತ ಓಡೋಯ್ತು
ದುಃಖವ ಮನದಲಿ ಇಟ್ಟ್ಹೋಯ್ತು.॥೧೧॥

1 ಕಾಮೆಂಟ್‌: