ಮನಃ ಸಿಂಚನ...!
ನನ್ನೆಲ್ಲಾ ಪ್ರೀತಿಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ ಈ ಒಂದು ಶುಭ ಸಂದರ್ಭದಲ್ಲಿ 'ಮನಃ ಸಿಂಚನ' ಎಂಬ ಹೊಸ ಕನ್ನಡ ಬ್ಲಾಗೊಂದನ್ನು ಆರಂಭಿಸುತ್ತಿದ್ದೇನೆ. ತಮಗೆಲ್ಲರಿಗೂ ಸ್ವಾಗತವನ್ನು ಕೋರುತ್ತಾ ಮುಂದುವರಿಯುತ್ತೇನೆ.
ಈ ಬ್ಲಾಗ್ನಿಂದ ಹುಡುಕಿ
Main Menu
ಗುರುವಾರ, ಏಪ್ರಿಲ್ 5, 2012
"ಬ್ರಹ್ಮ ಲಿಪಿ"
ಒಂದು ಊರಿನಲ್ಲಿ ಒಬ್ಬ ರಾಜಕುಮಾರನಿದ್ದ. ಅವನು ರಾಜಕುಮಾರನಾಗಿದ್ದರೂ ಯಾಕೋ ಅವನ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗಳು ಅವನನ್ನು ಕಾಡುತ್ತಲೇ ಇತ್ತು. ಇಡೀ ಜೀವನವೇ ಬೇಡವೆನಿಸುತ್ತಿತ್ತು. ಆದ್ದರಿಂದ ಇನ್ನು ಬದುಕುದಕಿಂತ ಸಾಯುವುದೇ ಲೇಸು ಎಂದರಿತ ಅವನು ಹಗ್ಗವನ್ನು ಹಿಡಿದು ಕಾಡಿಗೆ ಹೊರಟ. ಆಗ ದಾರಿಮಧ್ಯೆಯಲ್ಲಿ ಬ್ರಹ್ಮದೇವನು ಎದುರಾಗಿ ನೀನೆಲ್ಲಿಗೆ ಹೊರಟಿರುವಿ ಎಂದು ಪ್ರಶ್ನಿನಿಸಿದಾಗ ನಾನು ನೇಣು ಹಾಕಿಕೊಂಡು ಸಾಯಲು ಸಿದ್ಧನಾಗಿ ಹೋಗುತ್ತಿದ್ದೇನೆ ಎಂದು ತನ್ನ ವೃತ್ತಾಂತವನ್ನು ತಿಳಿಸುತ್ತಾನೆ. ಆಗ ಚಕಿತನಾದ ಬ್ರಹ್ಮದೇವನು ನೀನು ಸಾಯುವುದೇ...? ಇದು ನಿನ್ನ ಕನಸಿನ ಮಾತು. ಅಲ್ಲಾ...! ಇನ್ನು ನಿನ್ನ ಜೀವನದಲ್ಲಿ ಏನೆಲ್ಲಾ ಆಗ್ಲಿಕ್ಕಿದೆ ಮಾರಯ. ಅದು ಬಿಟ್ಟು ನೀನು ಸಾಯ್ಲಿಕ್ಕೆ ಮುಂದಾಗಿದ್ಯಲ್ವಾ...? ಎಂದು ಅವನ ಜೀವನದ ಬಗ್ಗೆ ಅರಿವು ಮೂಡಿಸಿದ. ಇದನ್ನು ಕೇಳಿ ಚಿಂತಾಕ್ರಾಂತನಾದ ರಾಜಕುಮಾರ ನನ್ನಿಂದ ಇನ್ನು ಏನಾಗಬೇಕಾಗಿದೆ ಎಂದು ಬಹಳ ಆಶ್ಚರ್ಯದಿಂದ ಪ್ರಶ್ನಿನಿಸಿದ. ಆಗ ನೀನು ಇನ್ನೂ ಚಿಕ್ಕವ, ಇನ್ನು ದೊಡ್ಡದಾಗಿ ಬೆಳೆಯಲಿಕ್ಕಿದೆ, ಆನಂತರ ಮದುವೆಯಾಗಿ ರಾಜ್ಯಭಾರ ಮಾಡುವಂತಹ ಭಾಗ್ಯ ನಿನಗಿದೆ. ಎಂದು ಅವನ ಭವಿಷ್ಯವನ್ನು ನುಡಿದ. ಇದನ್ನು ಕೇಳಿ ಆಶ್ಚರ್ಯಚಕಿತನಾದ ರಾಜಕುಮಾರ ಮದುವೆಯಾಗಲು ಹೆಣ್ಣು ಯಾರೆಂದು ಕೇಳಿದಾಗ ನಿನ್ನ ಸಾಮ್ರಾಜ್ಯದಲ್ಲಿರುವ ಮನುಷ ವರ್ಗದ ಮಹಿಳೆಯೋರ್ವಳ ಮಗಳೊಬ್ಬಳು ನಿನ್ನ ಹೆಂಡತಿಯಾಗಳಿರುವಳು. ಆದರೆ ಅವಳು ಇನ್ನೂ ತಾಯ ಹೊಟ್ಟೆಯಲ್ಲಿಯೇ ಬೆಳೆಯುತ್ತಿದ್ದಾಳೆ ಎಂದು ತಿಳಿಸುತ್ತಾನೆ. ಆಗ "ಉಚ್ಚ ಕುಲದಲ್ಲಿ ಹುಟ್ಟಿ ಬೆಳೆದ ನಾನು ಕೆಳವರ್ಗದ ಹುಡುಗಿಯನ್ನು ಮದುವೆಯಾಗಿ ರಾಜ್ಯಭಾರ ಮಾಡುವುದಾದರೂ ಹೇಗೆ, ಪ್ರಜೆಗಳು ಏನು ಹೇಳಲಿಕ್ಕಿಲ್ಲ" ಎಂದು ಚಿಂತಾಜನಕನಾಗಿ ಆಯ್ತು ನಾನು ಸಾಯೋದಿಲ್ಲ ಎಂದು ಭಾಷೆಯಿಟ್ಟು ಹಿಂತಿರುಗಿ ಅವಳ ಜನನವನ್ನೇ ಕಾಯುತ್ತಿದ್ದ. ಸ್ವಲ್ಪ ದಿನದ ನಂತರ ಮಗುವಿನ ಜನನದ ವಾರ್ತೆಯನ್ನು ಕೇಳಿ ಅವರ ಮನೆಗೆ ತೆರಳಿದ ಆತ ಆ ಮಗುವಿನ ತಾಯಿಯಲ್ಲಿ ಮಗುವನ್ನು ನೋಡಲು ಕೊಡಿ ಎಂದು ಕೇಳಿದಾಗ, "ಕೆಳವರ್ಗದಲ್ಲಿ ಹುಟ್ಟಿದ ಮಗುವನ್ನು ಉಚ್ಚ ಕುಲದಲ್ಲಿ ಹುಟ್ಟಿದ ನೀವು ಮುಟ್ಟಿದರೆ ನಿಮ್ಮ ಕುಲಕ್ಕೆ ಹಾನಿಯಾಗಬಹುದು, ಕುಲಕ್ಕೆ ಅಪಕೀರ್ತಿ ಒದಗಬಹುದು" ಎಂದು ಹೇಳಿ ಮಗುವನ್ನು ನೀಡಲು ಹಿಂಜರಿಯುತ್ತಾಳೆ. ಅದಕ್ಕಂಜದ ರಾಜಕುಮಾರ ಮಕ್ಕಳೆಂದರೆ ದೇವರಿಗೆ ಸಮಾನವಂತೆ ಆದ್ಧರಿಂದ ಯಾವುದೇ ಮಗುವನ್ನು ಮುಟ್ಟಿದರೆ ಅದು ಕುಲಕ್ಕೆ ಅಪಕೀರ್ತಿ ತರಲಾರದು ಉಚ್ಚಕುಲವಾದರೇನು ನಾನು ಅದಕ್ಕೆ ಮಹತ್ವ ಕೊಡೋದಿಲ್ಲ, ಎಂದು ಒತ್ತಾಯಪಡಿಸುತ್ತಾನೆ. ಆತನ ಒತ್ತಯಕ್ಕೆ ಮಣಿದ ಅವಳು ಕೈಯಲ್ಲಿ ಬರೀಮೈಯಲ್ಲಿದ್ದ ಮಗುವನ್ನು ಅವನಿಗೆ ನೀಡುತ್ತಾಳೆ. ಅದನ್ನು ಪಡೆದುಕೊಂಡ ಅವನು ಒಂದು ಬಟ್ಟೆಯನ್ನು ನೀಡೆಂದು ಕೇಳುತ್ತಾನೆ. ಆಗ ಅವಳು ಒಳಗೆ ನಡೆದಾಗ ಮಗುವನ್ನು ಎತ್ತಿಕ್ಕೊಂಡು ಸೀದಾ ಬಂದು ಉಚ್ಚಕುಲದಲ್ಲಿ ಹುಟ್ಟಿ ಬೆಳೆದ ನನಿಗೆ ನೀಚ ಕುಲದ ಹೆಣ್ಣು ಮಗು ದಕ್ಕಬಾರದು ಎಂದು ಹಟಗಟ್ಟಿ ಈ ಮಗುವನ್ನು ಹುಲಿ ತಿಂದೋಗಲಿ ಎಂದು ತನ್ನ ಮಾವನ ರಾಜ್ಯದೊಳಗಿನ ಹುಲಿಯ ಗುಹೆಯೊಂದರಲ್ಲಿ ಅಡಗಿಸಿಡುತ್ತಾನೆ.
ಅವನ ಮಾವನಾದ ಅರಸನು ತನ್ನ ಊರಿನಲ್ಲಿ ಕಾಡುಪ್ರಾಣಿಗಳಿಂದ ತನ್ನ ಪ್ರಜೆಗಳಿಗಾದ ಹಾನಿಯಿಂದಾಗಿ ಬೇಟೆಯಾಡಲು ಆ ಕಾಡಿಗೆ ಬಂದಾಗ ಮಗುವಿನ ಅಳುವೊಂದು ಕೇಳುತ್ತದೆ. ಮದುವೆಯಾಗಿದ್ದರೂ ಯಾವುದೇ ಮಕ್ಕಳಿಲ್ಲದ ಆತ ಅದನ್ನು ಕೇಳಿ ಸಂತೋಷಗೊಂಡು ಆ ಕಡೆಗೆ ಮುನ್ನಡೆಯುತ್ತಾನೆ. ಆದರೆ ಸ್ವಲ್ಪಹೊತ್ತು ಯಾವುದೇ ಸ್ವರಗಳು ಕೇಳದೇ ಇದ್ದಾಗ ಬೇಸರಗೊಂಡ ಅವನಿಗೆ ತನ್ನ ಮಂತ್ರಿ "ಬೊಬ್ಬೆ ಹಾಕಿದಾಗ ಮಗು ಹೆದರಿ ಕಿರುಚಾಡಬಹುದು" ಎಂಬ ಉಪಾಯವನ್ನು ಹೇಳುತ್ತಾನೆ. ಅದಕ್ಕನುಸಾರವಾಗಿ ಬೇಟೆಯವರೆಲ್ಲರೂ ಜೋರಾಗಿ ಬೊಬ್ಬೆ ಹಾಕಿದಾಗ ಆ ಮಗು ಹೆದರಿಕೊಂಡು ಕಿರುಚಾಡಲು ಆರಂಭಿಸುತ್ತದೆ. ಆಗ ಮತ್ತೆ ಆ ಸ್ವರದ ಹತ್ತಿರ ಹೋಗಿ ಹುಲಿಯ ಗುಹೆಯಲ್ಲಿ ಮಗುವನ್ನು ಕಂಡು ಈ ಮಗು ಇಲ್ಲಿ ಹೇಗೆ ಬಂತು ಎಂದು ಆಶ್ಚರ್ಯಪಡುತ್ತಾನೆ. ಪರವಾಗಿಲ್ಲ ಇದು ನನಗೆ ದೇವರು ಕೊಟ್ಟ ವರ ಎಂದು ಭಾವಿಸಿ ತನ್ನ ಅರಮನೆಗೆ ನಡೆದು ಆ ಮಗುವನ್ನು ದೊಡ್ಡವಳಾಗುವವರೆಗೆ ಚೆನ್ನಾಗಿ ಸಾಕುತ್ತಾನೆ, ಮುಂದಕ್ಕೆ ಅವಳ ಮದುಮಗಳಾಚರಣೆ ಬರುತ್ತದೆ. ಅದಕ್ಕಾಗಿ ಊರಲ್ಲಿ ಢಂಗೂರವನ್ನು ಸಾರಿಸುತ್ತಾನೆ.
ಮಗುವನ್ನು ತಪ್ಪಿಸಿಟ್ಟ ರಾಜಕುಮಾರನು ನನ್ನ ಪರಿಚಯ ಇನ್ನು ಯಾರಿಗೂ ಸಿಗಬಾರದು, ಮತ್ತು ಯಾರೂ ಹುಡುಕಿದರೂ ನಾನು ಸಿಗಬಾರದೆಂದು ತಲೆಮರಿಸಿಕೊಳ್ಳಲು ತನ್ನ ರಾಜ್ಯವನ್ನೇ ಬಿಟ್ಟು ಪಲಾಯನ ಗೈಯ್ಯುತ್ತಾನೆ. ಸುಮಾರು ವರ್ಷ ಯಾವುದೇ ಆಹಾರವಿಲ್ಲದೆ, ಅಲ್ಲಿಯೂ ನೆಮ್ಮದಿಯಿಲ್ಲದೇ ಬಿಕಾರಿಯಾಗಿ ಜೀವನ ನಡೆಸುತ್ತಾನೆ. ಇದರಿಂದ ಮತ್ತೆ ಬೇಸರಗೊಳ್ಳುತ್ತಾ ಮತ್ತೆ ಮತ್ತೆ ಸಮಸ್ಯೆಗಳ ಸಾಗರವಾಗುತ್ತಾನೆ. ಹಸಿವಿನಿಂದ ಕಂಗಲಾಗುತ್ತಾನೆ. ಹೀಗಿರುವಾಗ ಇಂತಹ ಒಂದು ಸಂದರ್ಭದಲ್ಲಿ ಅಲ್ಲಿನ ಯಾವನೋ ಒಬ್ಬ ಅವನನ್ನು ನೋಡಿ "ನೋಡು ಮಾರಯ ನಮ್ಮೂರಿನ ಅರಸರ ಮನೆಯಲ್ಲಿ ಇಂದು ಭಾರೀ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಅಲ್ಲದೇ ಇವತ್ತು ಒಳ್ಳೆಯ ಬೋಜನ ವ್ಯವಸ್ಥೆ ಕೂಡಾ ಇದೆ" ಎಂದು ಆ ಢಂಗೂರದ ವಿಷಯವನ್ನು ತಿಳಿಸುತ್ತಾನೆ. ಹಸಿವಿನ ಕಂಗಲಾಗಿದ್ದ ಈತ ಅವನ ಮಾತಿಗೆ ೦ಹೂ ಗೊಟ್ಟು ಮುನ್ನಡೆಯುತ್ತಾನೆ. ಅಲ್ಲಿಗೆ ಹೋದ ಆತ ಇವನೊಂದಿಗೆ ಊಟಕ್ಕೆ ಕುಳಿತುಕೊಂಡಾಗ ಅದೇ ಹೆಣ್ಣು ಮಗಳು ಊಟ ಬಡಿಸುತ್ತಾಳೆ. ಆಗ ಅವನ ಪರಿಚಯ ಕಂಡು ಹಿಡಿದ ಊರಿನ ಜನರು ಅಂದು ಮಗುವನ್ನು ತಪ್ಪಿಸಿಕೊಂಡು ಹೋದವ ಇವನೇ ಎಂದು ರಾಜನ ಮುಂದೆ ದೂರುತ್ತಾರೆ.(ಆದರೆ ಆ ಹೆಣ್ಣೆ ಆ ಮಗುವೆಂದು ಅವರಿಗೂ ಗೊತ್ತಿರೋದಿಲ್ಲ.) ಆಗ ಅಲ್ಲಿನ ರಾಜನು ಅವನನ್ನು ಆ ಮಗುವಿನ ಬಗ್ಗೆ ವಿಚಾರಿಸಿದಾಗ ಆ ಮಗುವನ್ನು ಹುಲಿಯ ಗುಹೆಯಲ್ಲಿಟ್ಟಿದ್ದೇನೆ ಎಂದು ಎಲ್ಲಾ ವೃತ್ತಾಂತವನ್ನು ತಿಳಿಸುತ್ತಾನೆ. ಆಗ ಅದನ್ನು ಕೇಳಿದ ಆ ಹೆಣ್ಣು , ರಾಜ, ಊರಿನವರೆಲ್ಲಾರೂ ಆಶ್ಚರ್ಯಚಕಿತರಾಗುತ್ತಾರೆ. ಅವನ ಆ ತಂತ್ರದ ಉದ್ದೇಶವನ್ನರಿತ ರಾಜ ಅವನಿಗೆ ಅವಳನ್ನೆ ಕೊಟ್ಟು ಮದುವೆ ಮಾಡಿಕೊಟ್ಟು ಅವನನ್ನು ತನ್ನ ಅಳಿಯನನ್ನಾಗಿ ಸ್ವೀಕರಿಸಿ ತನ್ನ ಸಾಮ್ರಾಜ್ಯವನ್ನು ಬ್ರಹ್ಮನ ಮಾತಿನಂತೆ ಅವನಿಗೆ ನೀಡಿ ಪಟ್ಟಾಭಿಷೇಕ ಮಾಡುತ್ತಾನೆ. ಎಲ್ಲರೂ ಸಂತೋಷದಿಂದ ಅವನನ್ನು ತಮ್ಮ ರಾಜನನ್ನಾಗಿ ಸ್ವೀಕರಿಸುತ್ತಾರೆ.
ರಚನೆ-ಪ್ರಚಂಬಕ
ಸೋಮವಾರ, ಜನವರಿ 23, 2012
ವಿನಾಯಕ ದೇವರಿಗೆ ನಮಸ್ಕಾರ..........!
ಅಡಿಕೆಡಿಕೆ ಗೋಂಟಡ್ಕೆ
ಎಂತ ಗೋಂಟು
ಸತ್ತಗೊಂಟು
ಎಂತ ಸತ್ತ
ಎಮ್ಮೆ ಸತ್ತ
ಎಂತ ಎಮ್ಮೆ
ಮಠದೆಮ್ಮೆ
ಎಂತ ಮಠ
ಓದು ಮಠ
ಎಂತ ಓದು
ಗಿಳಿ ಓದು
ಎಂತ ಗಿಳಿ
ಮಾತು ಗಿಳಿ
ಎಂತ ಮಾತು
ಸೂಳೆ ಮಾತು
ಎಂತ ಸೂಳೆ
ಮುರ್ಕು ಸೂಳೆ
ಎಂತ ಮುರ್ಕು
ಬಂಡಿ ಮುರ್ಕು
ಎಂತ ಬಂಡಿ
ತೆಗೆದು ಬಂಡಿ
ಎಂತ ತೆಗೆದು
ಹುಳಿ ತೆಗೆದು
ಎಂತ
ಹುಳಿ ಲಿಂಬೆ ಹುಳಿ ಎಂತ ಲಿಂಬೆ ಗಜ ಲಿಂಬೆ ಎಂತ ಗಜ ಆನೆ ಗಜ ಎಂತ ಆನೆ ಪಟ್ಟದಾನೆ
ಪಚ್ಚೆ ಕಲ್ಲು ಪಾಣಿ ಮೆಟ್ಲು ವಿನಾಯಕ ದೇವರಿಗೆ ನಮಸ್ಕಾರ
--
ಬುಧವಾರ, ಡಿಸೆಂಬರ್ 14, 2011
ಅಲರಾಂ ಆಗ್ತನೇ ಇತ್ತು....!
ಅದೊಂದು ರಾತ್ರಿ ಮರುದಿನ ಏನೋ ಕಾರಣದಿಂದ ಬೇಗ ಹೊರಡಲು ೫ ಗಂಟೆಗೆ ಅಲರಾಂ ಇಟ್ಟಿದ್ದೆ. ಬೆಳಿಗ್ಗೆ ೫ ಗಂಟೆಗೆ ೦ಟಿ ೦ಟೀ ಎಂದು ಅಲರಾಂ ಶುರುವಾಯ್ತು, ಎಲ್ಲೋ ನಿದ್ರೆಯಲ್ಲಿದ್ದವನೇ ಎದ್ದು ಆಫ್ ಮಾಡಿದೆ. ಆದ್ರೂ ಅಲರಾಂ ಆಗ್ತನೇ ಇತ್ತು.
ಅರೇ.....! ಇದೇನು ಹೀಗೆ.. ಅಲರಾಂ ಆಫ್ ಮಾಡಿದ್ರೂ ಅದು ನಿಲ್ತನೇ ಇಲ್ಲವಲ್ಲಾ....!ಎಂದು ಆಶ್ಚರ್ಯದಿಂದ ಮೇಜಿನ ಮೇಲಿಂದ ಸ್ಕ್ರೂ ಟ್ರೆಯರನ್ನು ತಗೊನ್ಡು ಬಿಚ್ಚಿಸಿದೆ. ಆದ್ರೂ ಅಲರಾಂ ಆಗ್ತನೇ ಇತ್ತು, ಗಂಟೆಯ ಮುಳ್ಳುಗಳನ್ನೇ ತೆಗೆದುಬಿಟ್ಟೆ, ಆದ್ರೂ ನಿಲ್ತನೇ ಇಲ್ಲ, ಅರೇ...! ಇದೇನಾಯ್ತಪ್ಪಾ.. ಎಂದು ಆಲೋಚಿಸಿ ಅದರ ಸ್ಪೀಕರನ್ನೇ ತೆಗೆದು ನೋಡಿದೆ,ಆದ್ರೂ ನಿಲ್ಲಲೇಇಲ್ಲ.
ಅರೇ...! ಇದೇನಪ್ಪ ಹೀಗೆ ಎಂದು ಇನ್ನೂ ಬಿಚ್ಚಿಸಿ ಅದರ ಚಕ್ರಗಳನ್ನೇ ಕಿತ್ತು ತೆಗೆದೆ, ಅದ್ರೂ ಅಲರಾಂ ಮಾತ್ರ ಹಾಗೆನೇ ಇತ್ತು. ಕೊನೆಗೆ ಬ್ಯಾಟ್ರಿ ಮಾತ್ರ ಉಳಿದಿತ್ತು; ಕೊನೆಗೆ ಅದನ್ನೂ ತೆಗೆದು ಬಿಟ್ಟೆ.
ಅರೆರೇ...........! ಆದ್ರೂ ೦ಟಿ ೦ಟೀ ಅನ್ನೋ ಅಲರಾಂ ಶಬ್ಧ ಕೇಳ್ತನೇ ಇದೆಯಲ್ವಾ ಎನ್ನುವಷ್ಟರಲ್ಲೇ ತಲೆ ಕೆಟ್ಟೋಗಿತ್ತು. ಕೊನೆಗೆ ಸಿಟ್ಟಿನಿಂದ ಗಡಿಯಾರಕ್ಕೆನೇ ಜೋರಾಗಿ ಮೆಟ್ಟಿಬಿಟ್ಟೆ ಕಾಲಿಗೆ ಅದರ ಚೂರು ತಾಗಿ ಗಾಯ ಆದಾಗ ದೇವರಲ್ಲಿ ಕಾಲು ಗುಣ ಆಗುವನ್ತೆ, ಅಲರಾಂ ಅಫ್ ಅಗುವನ್ತೆ ಬೀಡಿಕೊಂಡೆ,ಅಷ್ಟರಲ್ಲಿ ಕಾಲಲ್ಲಿ ಜೋರಾಗಿ ರಕ್ತ ಸುರಿಯುವುದನ್ನು ನೋಡಿ ಎಚ್ಚರ ಆಯ್ತು. ಅಲರಾಂ ಮಾತ್ರ ಆಗ್ತನೇ ಇತ್ತು.
ಅರೆರೇ ಇದೇನ್ ಕಥೆ....! ನಾನೀಗ ಎಲ್ಲಿದ್ದೇನೆ...? ಈಗ ತಾನೆ ಗಡಿಯಾರ ಎಲ್ಲಾ ಪುಡಿಪುಡಿ ಮಾಡಿ ಹಾಕಿದ್ದೆ , ಅದ್ರೂ ಮತ್ತೆ ಅಲರಾಂ ಅಗ್ತಿದೆಯಲ್ವಾ..! ಹೋಗಿ ಆಫ್ ಮಡಿದೆ. ಆಫ್ ಆಯ್ತು.ಕಾಲು ನೋಡಿದೆ ಸರಿಯಾಗಿಯೇ ಇತ್ತು. ಗಂಟೆ ಏಳಾಗಿತ್ತು, ಎದ್ದವನೇ ಹೊರಟು ಓಡಿಬಿಟ್ಟೆ.............!
ಅರೇ.....! ಇದೇನು ಹೀಗೆ.. ಅಲರಾಂ ಆಫ್ ಮಾಡಿದ್ರೂ ಅದು ನಿಲ್ತನೇ ಇಲ್ಲವಲ್ಲಾ....!ಎಂದು ಆಶ್ಚರ್ಯದಿಂದ ಮೇಜಿನ ಮೇಲಿಂದ ಸ್ಕ್ರೂ ಟ್ರೆಯರನ್ನು ತಗೊನ್ಡು ಬಿಚ್ಚಿಸಿದೆ. ಆದ್ರೂ ಅಲರಾಂ ಆಗ್ತನೇ ಇತ್ತು, ಗಂಟೆಯ ಮುಳ್ಳುಗಳನ್ನೇ ತೆಗೆದುಬಿಟ್ಟೆ, ಆದ್ರೂ ನಿಲ್ತನೇ ಇಲ್ಲ, ಅರೇ...! ಇದೇನಾಯ್ತಪ್ಪಾ.. ಎಂದು ಆಲೋಚಿಸಿ ಅದರ ಸ್ಪೀಕರನ್ನೇ ತೆಗೆದು ನೋಡಿದೆ,ಆದ್ರೂ ನಿಲ್ಲಲೇಇಲ್ಲ.
ಅರೇ...! ಇದೇನಪ್ಪ ಹೀಗೆ ಎಂದು ಇನ್ನೂ ಬಿಚ್ಚಿಸಿ ಅದರ ಚಕ್ರಗಳನ್ನೇ ಕಿತ್ತು ತೆಗೆದೆ, ಅದ್ರೂ ಅಲರಾಂ ಮಾತ್ರ ಹಾಗೆನೇ ಇತ್ತು. ಕೊನೆಗೆ ಬ್ಯಾಟ್ರಿ ಮಾತ್ರ ಉಳಿದಿತ್ತು; ಕೊನೆಗೆ ಅದನ್ನೂ ತೆಗೆದು ಬಿಟ್ಟೆ.
ಅರೆರೇ...........! ಆದ್ರೂ ೦ಟಿ ೦ಟೀ ಅನ್ನೋ ಅಲರಾಂ ಶಬ್ಧ ಕೇಳ್ತನೇ ಇದೆಯಲ್ವಾ ಎನ್ನುವಷ್ಟರಲ್ಲೇ ತಲೆ ಕೆಟ್ಟೋಗಿತ್ತು. ಕೊನೆಗೆ ಸಿಟ್ಟಿನಿಂದ ಗಡಿಯಾರಕ್ಕೆನೇ ಜೋರಾಗಿ ಮೆಟ್ಟಿಬಿಟ್ಟೆ ಕಾಲಿಗೆ ಅದರ ಚೂರು ತಾಗಿ ಗಾಯ ಆದಾಗ ದೇವರಲ್ಲಿ ಕಾಲು ಗುಣ ಆಗುವನ್ತೆ, ಅಲರಾಂ ಅಫ್ ಅಗುವನ್ತೆ ಬೀಡಿಕೊಂಡೆ,ಅಷ್ಟರಲ್ಲಿ ಕಾಲಲ್ಲಿ ಜೋರಾಗಿ ರಕ್ತ ಸುರಿಯುವುದನ್ನು ನೋಡಿ ಎಚ್ಚರ ಆಯ್ತು. ಅಲರಾಂ ಮಾತ್ರ ಆಗ್ತನೇ ಇತ್ತು.
ಅರೆರೇ ಇದೇನ್ ಕಥೆ....! ನಾನೀಗ ಎಲ್ಲಿದ್ದೇನೆ...? ಈಗ ತಾನೆ ಗಡಿಯಾರ ಎಲ್ಲಾ ಪುಡಿಪುಡಿ ಮಾಡಿ ಹಾಕಿದ್ದೆ , ಅದ್ರೂ ಮತ್ತೆ ಅಲರಾಂ ಅಗ್ತಿದೆಯಲ್ವಾ..! ಹೋಗಿ ಆಫ್ ಮಡಿದೆ. ಆಫ್ ಆಯ್ತು.ಕಾಲು ನೋಡಿದೆ ಸರಿಯಾಗಿಯೇ ಇತ್ತು. ಗಂಟೆ ಏಳಾಗಿತ್ತು, ಎದ್ದವನೇ ಹೊರಟು ಓಡಿಬಿಟ್ಟೆ.............!
ಮಂಗಳವಾರ, ನವೆಂಬರ್ 1, 2011
ದುರಂತ ಜೀವನ
ಕೇಳಿರಿ ಕೇಳಿರಿ ನಾಡಿನ ಜನಗಳೆ
ಕಥೆಯೊಂದನು ನಾ ಹೇಳುವೆನು,
ಕಥೆಯೆಂದರೆ ಇದು ಬರಿಕಥೆಯಲ್ಲ
ಹೇಳುವೆ ನಾ ಈ ನಿಜ ಕಥೆಯ.॥೧॥
ಬನ್ನಿರಿ ಬನ್ನಿರಿ ಕಥೆಯನು ಕೇಳಿರಿ
ಈ ಕಥೆಯು ಬಲು ಸುಂದರವೋ?
ಕೇಳಿರಿ ಕೇಳಿರಿ ಈ ಕಥೆಯನ್ನು
ಎಂದೆಂದಿಗೂ ಈ ಕಥೆ ಮಾಡದಿರಿ.॥೨॥
ಇರುವರು ಜನರು ನಾಡಿನಲಿ
ಲೋಪ ಹೃದಯದ ದೇಹದಲಿ
ಇರುವುದೇ ಇವರಿಗೆ ಜ್ಞಾನದ ಮಿದುಳು,
ಇದ್ದರೆ ಈ ಕಥೆ ಮಾಡುವರೋ?॥೩॥
ದೂರದ ಊರಲಿ ಮನೆಯೊಂದಿತ್ತು
ಹೊಟ್ಟೆ ತುಂಬಿದ ನಾಯೊಂದಿತ್ತು.
ನಾಲಕು ದಿನದ ನಂತರವಷ್ಟೇ
ಮರಿಗೆ ಜನ್ಮವ ನೀಡಿತ್ತು.॥೪॥
ಹೆಣ್ಣದು ಹೆಣ್ಣದು ನಮಗೆ ಬೇಡದು
ಬೀದಿಗೆ ತಂದು ಹಾಕಿದರು.
ಶಾಲಾಮಕ್ಕಳ ಬೆನ್ನ ಹಿಡಿದು
ಶಾಲೆಯ ಒಳಗೂ ಹೊಕ್ಕಿದವು.॥೫॥
ಗುರುಗಳು ಇದ್ದರು ಆ ದಿನದಿ
ಪಾಠವ ಮಾಡುತ ಕ್ಲಾಸಿನಲಿ.
ಮಕ್ಕಳ ಮುಖದಲಿ ನಗುವೂ ಬಂತು
ಕುಂಞ ಕುಂಞ ಎನ್ನುವ ಶಬ್ದವೂ ಬಂತು.॥೬॥
ಏನದು ಏನದು ಕೇಳಿದ ಗುರುಗಳು
ಮಕ್ಕಳ ಸಂಖ್ಯೆಯು ಹೆಚ್ಚಿತ್ತು.
ಓಡಿಸಿ ಓಡಿಸಿ ದೂರವ ಓಡಿಸಿ
ದಂಡವ ಹಿಡಿದು ಗುಡುಗಿದರು.॥೭॥
ಹೊರಗಡೆ ನಿಂತ ನಾಯಿ ಮರಿಯು
ಆಹಾರಕ್ಕಾಗಿ ಹುಡುಕುತಲಿತ್ತು.
ಮಳೆಯ ಹನಿಯಲಿ ನೆನೆದು ನೆನೆದು
ಗಡ-ಗಡ ಗಡ-ಗಡ ನಡುಗುತಲಿತ್ತು.॥೮॥
ನಾಯಿಮರಿಯನು ಕಂಡ ಕಾಗೆಯು
ಆಹಾರ ಹುಡುಕುತ ಬರುತ್ತಿತ್ತು.
ಕಟ-ಕಟ ಕುಟ್ಟುವ ದೃಶ್ಯವು ನನ್ನ
ಕಣ್ಣೀರನ್ನು ಸುರಿಸಿತ್ತು.॥೯॥
ಮರಿಯನು ಮನೆಗೆ ಹೊಯ್ದಾಯ್ತು
ಅನ್ನ ನೀರ ಕೊಟ್ಟಾಯ್ತು
ಬಾಡಿದ ಮುಖವನು ಹೊಂದಿತ್ತು,
ಮೂಲೆ ಗುಂಪಿಗೆ ಸೇರಿತ್ತು.॥೧೦॥
ನಗುತಲೇ ಇತ್ತು ಇಣುಕುತಲೀ
ನೀರು ತುಂಬಿದ ಪಾತ್ರೆಯಲಿ
ಬಳಗವ ಕರೆಯುತ ಓಡೋಯ್ತು
ದುಃಖವ ಮನದಲಿ ಇಟ್ಟ್ಹೋಯ್ತು.॥೧೧॥
ಕಥೆಯೊಂದನು ನಾ ಹೇಳುವೆನು,
ಕಥೆಯೆಂದರೆ ಇದು ಬರಿಕಥೆಯಲ್ಲ
ಹೇಳುವೆ ನಾ ಈ ನಿಜ ಕಥೆಯ.॥೧॥
ಬನ್ನಿರಿ ಬನ್ನಿರಿ ಕಥೆಯನು ಕೇಳಿರಿ
ಈ ಕಥೆಯು ಬಲು ಸುಂದರವೋ?
ಕೇಳಿರಿ ಕೇಳಿರಿ ಈ ಕಥೆಯನ್ನು
ಎಂದೆಂದಿಗೂ ಈ ಕಥೆ ಮಾಡದಿರಿ.॥೨॥
ಇರುವರು ಜನರು ನಾಡಿನಲಿ
ಲೋಪ ಹೃದಯದ ದೇಹದಲಿ
ಇರುವುದೇ ಇವರಿಗೆ ಜ್ಞಾನದ ಮಿದುಳು,
ಇದ್ದರೆ ಈ ಕಥೆ ಮಾಡುವರೋ?॥೩॥
ದೂರದ ಊರಲಿ ಮನೆಯೊಂದಿತ್ತು
ಹೊಟ್ಟೆ ತುಂಬಿದ ನಾಯೊಂದಿತ್ತು.
ನಾಲಕು ದಿನದ ನಂತರವಷ್ಟೇ
ಮರಿಗೆ ಜನ್ಮವ ನೀಡಿತ್ತು.॥೪॥
ಹೆಣ್ಣದು ಹೆಣ್ಣದು ನಮಗೆ ಬೇಡದು
ಬೀದಿಗೆ ತಂದು ಹಾಕಿದರು.
ಶಾಲಾಮಕ್ಕಳ ಬೆನ್ನ ಹಿಡಿದು
ಶಾಲೆಯ ಒಳಗೂ ಹೊಕ್ಕಿದವು.॥೫॥
ಗುರುಗಳು ಇದ್ದರು ಆ ದಿನದಿ
ಪಾಠವ ಮಾಡುತ ಕ್ಲಾಸಿನಲಿ.
ಮಕ್ಕಳ ಮುಖದಲಿ ನಗುವೂ ಬಂತು
ಕುಂಞ ಕುಂಞ ಎನ್ನುವ ಶಬ್ದವೂ ಬಂತು.॥೬॥
ಏನದು ಏನದು ಕೇಳಿದ ಗುರುಗಳು
ಮಕ್ಕಳ ಸಂಖ್ಯೆಯು ಹೆಚ್ಚಿತ್ತು.
ಓಡಿಸಿ ಓಡಿಸಿ ದೂರವ ಓಡಿಸಿ
ದಂಡವ ಹಿಡಿದು ಗುಡುಗಿದರು.॥೭॥
ಹೊರಗಡೆ ನಿಂತ ನಾಯಿ ಮರಿಯು
ಆಹಾರಕ್ಕಾಗಿ ಹುಡುಕುತಲಿತ್ತು.
ಮಳೆಯ ಹನಿಯಲಿ ನೆನೆದು ನೆನೆದು
ಗಡ-ಗಡ ಗಡ-ಗಡ ನಡುಗುತಲಿತ್ತು.॥೮॥
ನಾಯಿಮರಿಯನು ಕಂಡ ಕಾಗೆಯು
ಆಹಾರ ಹುಡುಕುತ ಬರುತ್ತಿತ್ತು.
ಕಟ-ಕಟ ಕುಟ್ಟುವ ದೃಶ್ಯವು ನನ್ನ
ಕಣ್ಣೀರನ್ನು ಸುರಿಸಿತ್ತು.॥೯॥
ಮರಿಯನು ಮನೆಗೆ ಹೊಯ್ದಾಯ್ತು
ಅನ್ನ ನೀರ ಕೊಟ್ಟಾಯ್ತು
ಬಾಡಿದ ಮುಖವನು ಹೊಂದಿತ್ತು,
ಮೂಲೆ ಗುಂಪಿಗೆ ಸೇರಿತ್ತು.॥೧೦॥
ನಗುತಲೇ ಇತ್ತು ಇಣುಕುತಲೀ
ನೀರು ತುಂಬಿದ ಪಾತ್ರೆಯಲಿ
ಬಳಗವ ಕರೆಯುತ ಓಡೋಯ್ತು
ದುಃಖವ ಮನದಲಿ ಇಟ್ಟ್ಹೋಯ್ತು.॥೧೧॥
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)